ವಿಟ್ಲ: ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ
ವಿಟ್ಲ: ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ
ವಿಟ್ಲಪಡ್ನೂರು ಗ್ರಾಮದ ಕುಂಟುಕುಡೆಲು ಎಂಬಲ್ಲಿ ಸೆ.17ರಂದು ನಡೆದಿದೆ.
ಮನೆಯ ಲೀಲಾ ಕೆ ಎಂಬವರು ಬಾಗಿಲುಗಳನ್ನು ಭದ್ರಪಡಿಸಿ, ಮಗಳೊಂದಿಗೆ ಕೊಡಂಗಾಯಿ ಎಂಬಲ್ಲಿಗೆ ತೆರಳಿದವರು ಮಧ್ಯಾಹ್ನ ವೇಳೆ ಮನೆಗೆ ಹಿಂತಿರುಗಿದಾಗ, ಮನೆಯ ಹಿಂಭಾಗದ ಬಾಗಿಲನ್ನು ಯಾರೋ ಕಳ್ಳರೂ ಯಾವುದೋ ಆಯುಧದಿಂದ ಮುರಿದು ಒಳಪ್ರವೇಶಿಸಿರುವುದು ಕಂಡು ಬಂದಿದೆ. ನಂತರ ಅವರು ಮನೆಯಲ್ಲಿ ಪರಿಶೀಲಿಸಿದಾಗ, ಮನೆಯ ಕೋಣೆಯೊಂದರ ಕಪಾಟಿನ ಒಳಗಡೆ ಇರಿಸಿದ್ದ, ಒಟ್ಟು 36 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿರುತ್ತದೆ. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ರೂ 1,46,000/- ರೂ ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.