ಪುತ್ತೂರು ನಗರ ಪೊಲೀಸ್ ಠಾಣೆಯ ಎಎಸ್ಸೈ ಸುಂದರ ಕಾನಾವು ನಿಧನ
ಪುತ್ತೂರು: ಪುತ್ತೂರು ನಗರ ಠಾಣೆಯ ಎಎಸ್ ಐ, ಪೆರುವಾಜೆ ಗ್ರಾಮದ ಕಾನಾವು ನಿವಾಸಿ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.