ಕಡಬ: ರೆಫ್ರಿಜರೇಟರ್ ಸ್ಪೋಟ
ಕಡಬ: ಮನೆಯಲ್ಲಿದ್ದವರು ಮನೆಯಿಂದ ಹೊರಟ ಒಂದು ಗಂಟೆಯ ಅವಧಿಯಲ್ಲಿ ಮನೆಯೊಳಗಿದ್ದ ರೆಫ್ರಿಜರೇಟರ್ ಸ್ಪೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟುಹೋದ ಘಟನೆ ಕಡಬದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಕಡಬದ ಅಡ್ಡಗದ್ದೆ ಅಂಗನವಾಡಿ ಬಳಿ ಇರುವ ಫಾರುಕ್ ಎಂಬವರ ಮನೆಯಲ್ಲಿ ಈ ಅವಘಡ ಜೂ.9ರಂದು 3 ಘಂಟೆ ಸುಮಾರಿಗೆ ನಡೆದಿದೆ.
ಮದ್ಯಾಹ್ನದ ವೇಳೆ ಫಾರುಕ್ ಮತ್ತು ಅವರ ಪತ್ನಿ ಸಹಿತ ಮಕ್ಕಳು ಮನೆಯಲ್ಲಿದ್ದರು. ಬಳಿಕ ಪತ್ನಿ ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ಫಾರುಕ್ ಅವರು ತಹಶಿಲ್ದಾರ್ ಕಚೇರಿ ಬಳಿ ಇರುವ ತನ್ನ ಅಂಗಡಿಗೆ ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು ದೊಡ್ಡ ದುರಂತವೊಂದು ತಪ್ಪಿದೆ.