ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದ್ಯಕೀಯ ಪದವಿ ಪಡೆದ ಡಾ.ರಮೀಝ್ ಗೆ ಸನ್ಮಾನ
ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ನಿಂದ ಉನ್ನತ ಶ್ರೇಣಿಯಲ್ಲಿ ಎಂಬಿಬಿಎಸ್ ಪದವಿ ಪಡೆದು ಸುಳ್ಯ ಗಾಂಧಿನಗರ ಬೀಜಕೊಚ್ಚಿ ನಿವಾಸಿ ಮಹಮ್ಮದ್ ರಮೀಝ್ ರವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯರುಗಳಾದ ಕೆ. ಎಸ್ ಉಮ್ಮರ್, ಶರೀಫ್ ಕಂಠಿ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಮಲೆನಾಡು ಟ್ರಸ್ಟ್ ನಿರ್ದೇಶಕರುಗಳಾದ ರಿಜ್ವಾನ್ ಜನತಾ, ಶಾಲಿ ಕಟ್ಟೆಕ್ಕಾರ್ಸ್, ನಾಸಿರ್ ಕಟ್ಟೆಕ್ಕಾರ್ಸ್, ಅನ್ಸಾರ್ ನಿರ್ದೇಶಕರುಗಳಾದ ಕೆ. ಬಿ ಇಬ್ರಾಹಿಂ, ಶಹೀದ್ ಪಾರೆ, ಉದ್ಯಮಿ ಖಯ್ಯುಮ್ ಕಟ್ಟೆಕ್ಕಾರ್ಸ್, ಶಿಹಾಬ್ ಕೇರ್ಪಳ, ಅಶ್ರಫ್ ಫರ್ನಿಚರ್ ಪ್ಯಾಲೇಸ್ ಮೊದಲಾವರು ಉಪಸ್ಥಿತರಿದ್ದರು. ರಮೀಝ್ ಸುಳ್ಯದ ಜನತಾ ಗ್ರೂಪ್ಸ್ ನ ಪ್ರಿಯ ಸಿಮೆಂಟ್ ಉದ್ಯಮಿ ಅಬ್ದುಲ್ ರೆಹಮಾನ್ ಮತ್ತು ರೈನಾ ದಂಪತಿಗಳ ಪುತ್ರ.