ಜೆಡಿಎಸ್ ಗೆ ಬಿಗ್ ಶಾಕ್
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಶಾಕ್ ನೀಡಿದೆ. ಜೆಡಿಎಸ್ ನ 9 ಮಂದಿ ಚನ್ನಪಟ್ಟಣ ನಗರಸಭಾ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಪ್ರಶಾಂತ್ ಪಿ. ಸೇರಿದಂತೆ 9 ಮಂದಿ ಜೆಡಿಎಸ್ ಸದಸ್ಯರು ಜೆಡಿಎಸ್ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಎಂಎಲ್ಸಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ಗುರುವಾರ ರಾತ್ರಿ ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇವರ ಜತೆಗೆ ಪಕ್ಷೇತರ ಸದಸ್ಯೆ ಉಮಾ ಅವರೂ ಕಾಂಗ್ರೆಸ್ ಸೇರಿದ್ದಾರೆ.