ರಾಜ್ಯ ಹಜ್ ಸಮಿತಿ ಸದಸ್ಯರಾಗಿ ನೇಮಕಗೊಂಡ ಮಜ್ಲಿಸ್ ತಂಙಳ್ ರವರಿಗೆ ಸುಳ್ಯದ ಉಮರಾ ನಾಯಕರಿಂದ ಗೌರವಾರ್ಪಣೆ
ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾಗಿ ನೇಮಕ ಹೊಂದಿದ ಮುಡಿಪು ಮಜ್ಲಿಸ್ ಎಜು ಪಾರ್ಕ್ ಚೇರ್ಮ್ಯಾನ್ ಅಸ್ಸಯ್ಯ ದ್ ಅಶ್ರಫ್ ತಂಙಳ್ ಅಸ್ಸಖಾಫ್ ರವರನ್ನು ಸುಳ್ಯದ ಸಾಮಾಜಿಕ ಮುಖಂಡರುಗಳು ಅಭಿನಂದಿಸಿ ಗೌರವಾರ್ಪಣೆ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಂಙಳ್ ರವರು ಈ ವರ್ಷ ಹಜ್ ಯಾತ್ರಿಕರಿಗೆ ಮಂಗಳೂರಿನಿಂದ ನೇರ ವಿಮಾನ ಸೌಲಭ್ಯ, 5 ಜಿಲ್ಲೆ ಕೇಂದ್ರಿಕರಿಸಿ ಮಂಗಳೂರಿನಲ್ಲಿ ಮಲ್ಟಿ ಪರ್ಪಸ್ ಹಜ್ ಭವನ ನಿರ್ಮಿಸಲಾಗುವುದು ಎಂದರು ಈ ಬಾರಿ ಬಜೆಟ್ ನಲ್ಲಿ 10 ಕೋಟಿ ರೂ ಅನುದಾನ ಘೋಷಿಸಿದ ರಾಜ್ಯ ಸರಕಾರವನ್ನು ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮೀಫ್ ಉಪಾಧ್ಯಕ್ಷ ಕೆ.ಎಂ ಮುಸ್ತಫ ಸುಳ್ಯ, ಜಮ್ಮೀಯತುಲ್ ಫಲಾಹ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್, ಸುಳ್ಯ ಹಜ್ ಯಾತ್ರಿಕರ ಸಮನ್ವಯ ಸಂಚಾಲಕ ಹಸನ್ ಹಾಜಿ ಎ. ಆರ್. ಟ್ರೇಡರ್ಸ್ ಆನಿವಾಸಿ ಉದ್ಯಮಿ ಅಲಿ ಪೆರಾಜೆ, ರಫೀಕ್ ಎಂ.ರ್ ಮೊದಲಾದವರು ಉಪಸ್ಥಿತರಿದ್ದರು.