ತನ್ನದೇ ಲಾರಿಯ ಚಕ್ರದಡಿಗೆ ಸಿಲುಕಿ ಯುವಕ ದಾರುಣ ಮೃತ್ಯು
ಯುವಕನೋರ್ವ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಬದಿಯಡ್ಕ ಸಮೀಪ ವರದಿಯಾಗಿದೆ.
ಲಾರಿಯಿಂದ ಗೇಟ್ ತೆಗೆಯಲು ಇಳಿದಿದ್ದ ಅದೇ ಲಾರಿ ಚಾಲಕ ಚಕ್ರದಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ನೀರ್ಚಾಲು ಗೋಳಿಯಡ್ಕ ಎಂಬಲ್ಲಿ ನಡೆದಿದೆ.

ಪಾಡಿ ಉತ್ತರತ್ತೋಡಿ ನಿವಾಸಿ ಮುಹಮ್ಮದ್ ನೌಫಲ್ (23.ವ) ಮೃತಪಟ್ಟ ಯುವಕ.
ನೌಫಲ್ ತಾನು ಚಲಾಯಿಸುತ್ತಿದ್ದ ಲಾರಿಯ ಇಂಜಿನ್ ಚಾಲನೆಯಲ್ಲಿರಿಸಿ ಗೇಟ್ ತೆರೆಯಲು ಹೋದ ವೇಳೆ ಲಾರಿ ಏಕಾಏಕಿ ಮುಂದಕ್ಕೆ ಚಲಿಸಿದಾಗ ನೌಫಲ್ ಅದರ ಚಕ್ರದಡಿಗೆ ಸಿಲುಕಿದ್ದರು ಎನ್ನಲಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



