ತಿಂಗಳಾಡಿ: ತ್ಯಾಗರಾಜೆಯಲ್ಲಿ ಕಾರು ಪಲ್ಟಿ: ಹಲವರಿಗೆ ಗಾಯ
ಪುತ್ತೂರು: ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ನ.4ರಂದು ಸಂಜೆ ತಿಂಗಳಾಡಿ ಸಮೀಪದ ತ್ಯಾಗರಾಜೆಯಲ್ಲಿ ನಡೆದಿದೆ.
ಕುಂಬ್ರ ಕಡೆಯಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು. ತ್ಯಾಗರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೆ ಮತ್ತು ಮೂವರು ಮಕ್ಕಳಿಗೆ ಅಲ್ಪ ಗಾಯಗಳಾಗಿದೆ. ಕಾರು ಚಾಲಕ ಅಬ್ದುಲ್ಲ ಎಂಬವರ ಕೈಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಕಾರು ಪಲ್ಟಿಯಾದ ಕೂಡಲೇ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಾರೆಪುಣಿಯ ಬಿ.ಕೆ ಉಮ್ಮರ್ ಎಂಬವರು ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದವರನ್ನು ಹೊರೆ ತೆಗೆಯಲು ಸಹಕರಿಸಿದ್ದು ಇವರ ಮಾನವೀಯ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.