ದೇವರಕೊಲ್ಲಿ ಸಮೀಪ ವ್ಯಾನ್-ಕಾರು ಡಿಕ್ಕಿ, ಹಲವರಿಗೆ ಗಾಯ-ಸುಳ್ಯ ಆಸ್ಪತ್ರೆಗೆ ದಾಖಲು
ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವ್ಯಾನ್ ದೇವರಕೊಲ್ಲಿ ಸಮೀಪ ಕಾರೊಂದಕ್ಕೆ ಡಿಕ್ಕಿ ಹೊಡೆದು ಹಲವರು ಗಾಯಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.
ಎಮ್ಮೆಮಾಡು ಪುಣ್ಯ ಸ್ಥಳವನ್ನು ಸಂದರ್ಶಿಸಿ ಬರುತ್ತಿದ್ದ ಮಂಗಳೂರು ಮೂಲದ ಪ್ರವಾಸಿಗರು ಈ ವ್ಯಾನ್ ನಲ್ಲಿ ಇದ್ದರು ಎನ್ನಲಾಗಿದೆ.
ಘಟನೆಯಿಂದ ಗಾಯಗೊಂಡಿದ್ದ ಕೆಲವು ಮಂದಿ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಸುಳ್ಯ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ.
ಇಳಿಜಾರಿನಲ್ಲಿ ಬ್ರೇಕ್ ಸಿಗದ ಕಾರಣ ಚಾಲಕ ನಿಯಂತ್ರಣ ಕಳೆದುಕೊಂಡು ಸ್ಕಾರ್ಪಿಯೋ ವಾಹನಕ್ಕೆ ಡಿಕ್ಕಿ ಹೊಡೆದಿದು ಘಟನೆ ಸಂಭವಿಸಿದೆ ಎನ್ನಲಾಗಿದೆ.
ತಿಂಗಳಾಡಿ ಮತ್ತು ಬದಿಯಡ್ಕ ಮೂಲದವರು ಸ್ಕಾರ್ಪಿಯೋ ಕಾರಿನಲ್ಲಿದ್ದರು ಎನ್ನಲಾಗುತ್ತಿದ್ದು ಅದರಲ್ಲಿದ್ದ ನಾಲ್ಕು ಮಕ್ಕಳಿಗೂ ಸೇರಿದಂತೆ ಕೆಲವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು 2 ಅಂಬ್ಯಲೆನ್ಸ್, ಮತ್ತು ಪಿಕಪ್ ವಾಹನದಲ್ಲಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ.