ಹುಲಿ ಉಗುರ ಪ್ರಕರಣ: ಅರಣ್ಯ ಸಚಿವ ಈಶ್ವರ ಖಂಡ್ರೆ ಖಡಕ್ ಎಚ್ಚರಿಕೆ
ರಾಜ್ಯದಲ್ಲಿ ಹುಲಿ ಉಗುರ ಪೆಂಡೆಂಟ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಕೆಲವು ಬಂಧನಗಳಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಚಿತ್ರನಟ ದರ್ಶನ್ ಹಾಗೂ ವಿನಯ ಗುರೂಜಿ ಅವರು ಸಾರ್ವಜನಿಕವಾಗಿ ಹುಲಿ ಉಗುರು ತೊಟ್ಟು ಆಕ್ಷೇಪಾರ್ಹವಾಗಿ ನಡೆದು ಕೊಂಡಿದ್ದಾರೆ ಎನ್ನುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಅಧಿಕಾರಿಗಳು ಬದ್ಧರಾಗಿದ್ದಾರೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ದೂರು ನೀಡಿದರೆ, ನೆಲದ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಪ್ರಾಣಿಜನ್ಯ ವಸ್ತು ಗಳ ಬಳಕೆ ಸಂಗ್ರಹ, ಸಾಗಾಟ ಮೊದಲಿನಿಂದಲೂ ನಿಷೇಧ ಮಾಡಲಾಗಿದೆ. ಈ ಅಪರಾಧಕ್ಕೆ ಏಳು ವರ್ಷ ದ ಶಿಕ್ಷೆಯೂ ಇದೆ ಎಂದರು.