ಬಿಹಾರ: ಹಳಿ ತಪ್ಪಿದ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲು- ನಾಲ್ವರು ಸಾವು, ಹಲವರಿಗೆ ಗಾಯ
ಬಿಹಾರ: ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ಅ. 11ರಂದು ರಾತ್ರಿ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಆನಂದ್ ವಿಹಾರ್ ಟರ್ಮಿನಲ್ನಿಂದ ಕಾಮಾಕ್ಯಕ್ಕೆ ತೆರಳುತ್ತಿದ್ದ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲು ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ರಾತ್ರಿ 9:35 ಕ್ಕೆ ಹಳಿತಪ್ಪಿದ್ದು ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ ಆರು ಬೋಗಿಗಳು ಪಲ್ಟಿಯಾಗಿ ಟ್ರ್ಯಾಕ್ ಮೇಲೆ ಬಿದ್ದಿವೆ ಎಂದು ವರದಿಯಾಗಿದೆ.