ಬಿಎಎಂಎಸ್ ಅಂತಿಮ ಪರೀಕ್ಷೆ:
ಡಾ.ಆಯಿಷತ್ ಮುನೀರಾ
ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ
ಪುತ್ತೂರು: ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಕರ್ನಾಟಕ ಬೆಂಗಳೂರು ಇದರ ಅಂತಿಮ ಹಂತದ ವೃತ್ತಪರ ಬ್ಯಾಚುರಲ್ ಆಫ್ ಆಯುರ್ವೇದಿಕ್ ಮೆಡಿಕಲ್ ಆಂಡ್ ಸರ್ಜರಿ (ಬಿಎಎಂಎಸ್) ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ಡಾ. ಆಯಿಷತ್ ಮುನೀರಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದ ಅವರು 80% ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಈಕೆ ಬೆಳ್ಳಾರೆಯ ಖ್ಯಾತ ಉದ್ಯಮಿಯಾಗಿದ್ದ ದಿ.ಬಿ.ಎಚ್ ಹಸೈನಾರ್ ಹಾಜಿ ಹಾಗೂ ರುಖ್ಯಾ ದಂಪತಿಗಳ ಪುತ್ರಿ.