ಬೆಂಗಳೂರಿನಲ್ಲಿ ಹೆಚ್ಚಿದ ಪುಂಡರ ಅಟ್ಟಹಾಸ; ಬೇಕರಿ ಗಾಜು ಪುಡಿಪುಡಿ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚುತ್ತಿದೆ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಬೇಕರಿಯೊಂದರ ಗಾಜು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತುಂಗಾ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಾಸ್ಕ್ ಧರಿಸಿ ಬೈಕ್ ನಂಬರ್ ಪ್ಲೇಟ್ ಕಾಣದಂತೆ ಮಾಡಿಕೊಂಡು ಬಂದಿದ್ದ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಬೇಕರಿಗೆ ನುಗ್ಗಿ ದೊಣ್ಣೆ, ಕಲ್ಲಿನಿಂದ ಶೋಕೆಸ್ ಗಾಜು ಪುಡಿ ಮಾಡಿದ್ದಾರೆ. ಬೇಕರಿ ಪದಾರ್ಥ ಚೆಲ್ಲಿ ಮಾಡಿ ಪರಾರಿಯಾಗಿದ್ದಾರೆ. ಘಟನೆ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.