ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣ: ಇನ್ನೋರ್ವ ಆರೋಪಿ ಅರೆಸ್ಟ್
2 ವಾರಗಳ ಹಿಂದೆ ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ಸಹೋದರರಿಂದಲೇ ಕೊಲೆಗೈಯ್ಯಲ್ಪಟ್ಟ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟು ಇನ್ನೊಬ್ಬ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಉಸ್ಮಾನ್ರನ್ನು ಕೊಲೆಗೈಯ್ಯಲು ಅವರ ಸಹೋದರರಾದ ರಫೀಕ್ ಮತ್ತು ಸತ್ತಾರ್ ಉಪಯೋಗಿಸಿದ ಚೂರಿಯನ್ನು ರಫೀಕ್ ಮತ್ತು ಸತ್ತಾರ್ರ ಸಹೋದರ ಅರಂತೋಡಿನಲ್ಲಿರುವ ಮಾಯಿನ್ ಕುಟ್ಟಿಯವರ ಪುತ್ರ ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಬಾರಕ್ ಬಳಿ ಅವರಿಬ್ಬರು ಚೂರಿ ಕೇಳಿದ್ದು ಆಗ ಮುಬಾರಕ್ ಚೂರಿ ನೀಡಿದ್ದ ಎನ್ನಲಾಗಿದೆ.
ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆಯವರು ಸುಳ್ಯಕ್ಕೆ ದಾಳಿ ನಡೆಸಿ ಮುಬಾರಕ್ನನ್ನು ಬಂಧಿಸಿದರು. ನಿನ್ನೆ ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.