ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯದಲ್ಲೂ ಮೊಳಗಿದ ಧ್ವನಿ: ಗುತ್ತಿಗಾರು, ಕೊಲ್ಲಮೊಗ್ರದಲ್ಲಿ ಬ್ಯಾನರ್ ಅಳವಡಿಕೆ
ಸಾವಿರಾರು ಮಂದಿಯನ್ನು ಒಳಗೊಂಡ ವಾಟ್ಸ್ ಆಪ್ ಗ್ರೂಪ್ ರಚನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸುಳ್ಯ: ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ತಾಲೂಕಿನಲ್ಲಿಯೂ ಸಂಘಟನೆಗೆ ಸಿದ್ಧತೆಗಳು ನಡೆಯುತ್ತಿದೆ ಎಂದು ಸುದ್ದಿಗಳು ಕೇಳಿ ಬರುತ್ತಿದೆ.
ತಾಲೂಕಿನ ಗುತ್ತಿಗಾರು ಮತ್ತು ಕೊಲ್ಲಮೊಗ್ರದಲ್ಲಿ ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಕೆ ಈಗಾಗಲೇ ಕಂಡು ಬಂದಿದೆ.
ಕೊಲೆ ನಡೆದು 11 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಹೆಣ್ಣಲ್ಲವೇ, ಹಳ್ಳಿಗೊಂದು ನ್ಯಾಯ, ಡೆಲ್ಲಿಗೊಂದು ನ್ಯಾಯ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ, ಮಹೇಶ್ ತಿಮ್ಮರೋಡಿಯವರ ನ್ಯಾಯಯುತ ಹೋರಾಟ ಬೆಂಬಲಿಸೋಣ ಎಂಬಿತ್ಯಾದಿ ಬರಹಗಳನ್ನು ಬ್ಯಾನರ್ ಬರೆಯಲಾಗಿದೆ.
ಅಲ್ಲದೆ ಸದ್ದಿಲ್ಲದೇ ಸಾವಿರಾರು ಮಂದಿಯನ್ನು ಒಳಗೊಂಡ ವಾಟ್ಸಪ್ ಗ್ರೂಪುಗಳು ಹೋರಾಟಕ್ಕಾಗಿ ಸಿದ್ಧತೆ ಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.