ಕರಾವಳಿ

40 ಮಂದಿ ಶಾಸಕರಲ್ಲಿ ಹೇಳಿಯೂ ಪ್ರಯೋಜನವಾಗಿರಲಿಲ್ಲ, ಆದರೆ ನೀವು ಧ್ವನಿ ಎತ್ತಿದ್ದೀರಿ… ಶಾಸಕ ಅಶೋಕ್ ರೈ ಅಭಿನಂದಿಸಿದ ಸೇವಾಭಾರತಿ


ಪುತ್ತೂರು: ಬೆನ್ನುಮೂಲೆ ಮುರಿತಕ್ಕೊಳಗಾಗಿ ಬೆಡ್ ನಲ್ಲೇ ಕಾಲ ಕಳೆಯುತ್ತಿರುವವರ ನೋವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೀರಿ, ಇದೇ ವಿಚಾರವನ್ನು ವಿಧಾನಸಭೆಯಲ್ಲಿ ಮಾತನಾಡಿ ಎಂದು ನಮ್ಮ ಸಂಸ್ಥೆಯ ವತಿಯಿಂದ 40 ಶಾಸಕರಲ್ಲಿ ವಿನಂತಿ ಮಾಡಿದ್ದೆವು ಆದರೆ ಯಾರೂ ಇದರ ಪರ ಧ್ವನಿ ಎತ್ತಿರಲಿಲ್ಲ, ಯಾರೂ ಹೇಳದೆ ಸ್ವಯಂ ಆಗಿ ಬಡವರ ಪರ ಮಾತನಾಡಿದ್ದೀರಿ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರನ್ನು ಕನ್ಯಾಡಿಯ ಸೇವಾ ಭಾರತಿ ಸಂಸ್ಥೆಯವರು ಕಚೇರಿಗೆ ಆಗಮಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.


ಪುತ್ತೂರಿನಲ್ಲಿರುವ ಶಾಸಕರ ಚುನಾವಣಾ ಕಚೇರಿಗೆ ಭೇಟಿ ನೀಡಿದ ಸಂಸ್ಥೆಯ ಪ್ರಮುಖರು ಬೆನ್ನುಮೂಲೆ ಮುರಿತಕ್ಕೊಳಗಾದವರ ಜೀವನದ ಸಂಕಷ್ಟ ಅರಿತು ಅವರಿಗೆ ತಿಂಗಳಿಗೆ 5 ಸಾವಿರ ಮಾಸಾಶನ ನೀಡಬೇಕೆಂದು ವಿಧನಸಭೆಯಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಲಾಗಿದೆ. ಈ ಪ್ರಸ್ತಾಪವನ್ನು ಸರಕಾರ ಬೆಂಬಲಿಸಿ ಅವರಿಗೆ ಮಾಸಾಶನ ಬಂದಲ್ಲಿ ಅವರಿಗೊಂದು ಉತ್ತಮ ಜೀವನ ದೊರೆಯಲಿದೆ ಎಂದು ಸಂಸ್ಥೆಯ ಪ್ರಮುಖರು ಶಾಸಕರಲ್ಲಿ ಹೇಳಿಕೊಂಡರು.

ಈ ಸಂದರ್ಭದಲ್ಲಿ ಸೇವಾ ಭಾರತಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿನಾಯಕ ರಾವ್, ಕಾರ್ಯದರ್ಶಿ ಬಾಲಕೃಷ್ಣ, ವ್ಯವಸ್ಥಾಪಕ ಚರಣ್‌ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!