ಮಳೆಯ ಆರ್ಭಟಕ್ಕೆ ಕೊಡಗು ಕುಶಾಲನಗರದಲ್ಲಿ ಪ್ರವಾಹ ಭೀತಿ
ಕೊಡಗಿನ ಹಾರಂಗಿಯ ಹೊರಹರಿವು ಸೃಷ್ಠಿಸುತ್ತಿರುವ ಆತಂಕದಿಂದ
ಕಾವೇರಿ ನದಿ ತಟದ ನಿವಾಸಿಗಳನ್ನು ಕಂಗೆಡಿಸಿದೆ.
ಕುಶಾಲನಗರದ ತಗ್ಗು ಪ್ರದೇಶ ಸಾಯಿ ಬಡಾವಣೆಗೆ ನದಿ ನೀರು ನುಗ್ಗುತ್ತಿದ್ದು
ಮನೆಯಿಂದ ಸಾಮಗ್ರಿ ಹೊರಸಾಗಿಸಲು ಅಲ್ಲಿಯ ನಿವಾಸಿಗಳು ಹರಸಾಹಸ ಪಡುತ್ತಿರುವುದು ಕಂಡು ಬರುತ್ತಿದೆ.
ಮನೆಯ ಮಹಡಿಯಲ್ಲಿ ಆಶ್ರಯಕ್ಕೆ ಸಂತ್ರಸ್ಥರು ಮುಂದಾಗಿದ್ದಾರೆ.
ತಡರಾತ್ರಿ ಸ್ಥಳ ಪರಿಶೀಲನೆ ನಡೆಸಿರುವ ಶಾಸಕ ಮಂಥರ್ ಗೌಡ, ತಹಸೀಲ್ದಾರ್ ಪ್ರಕಾಶ್ ಸೇರಿದಂತೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ.