ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಸ್ಫೋಟ-ಓರ್ವ ಸಾವು
ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ನಗರದ ನಗರ್ತರಪೇಟೆಯಲ್ಲಿ ನಡೆದಿದೆ.
ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಮೃತ ವ್ಯಕ್ತಿ. ಚಿನ್ನ ಮೆಲ್ಟ್ ಮಾಡಲು ಆಕ್ಸಿಜನ್, ಎಲ್ಪಿಜಿ ಬಳಕೆ ವೇಳೆ ಸ್ಫೋಟಗೊಂಡಿದೆ. ಮಾಲೀಕರು ಹೊರಗಿದ್ದು ಕೆಲಸದವರು ಮಾತ್ರ ಅಂಗಡಿಯಲ್ಲಿದ್ದರು. ಆಕ್ಸಿಜನ್ ಸಿಲಿಂಡರ್ ಆಫ್ ಮಾಡದೆ ವಿಷ್ಣು ಊಟಕ್ಕೆ ತೆರಳಿದ್ದ. ಪ್ರೆಸರ್ ಹೆಚ್ಚಾದ ಹಿನ್ನೆಲೆ ಏಕಾಏಕಿ ಸ್ಫೋಟವಾಗಿದೆ ಎನ್ನಲಾಗಿದೆ.