ಕರಾವಳಿ

ತನ್ನ ಮಕ್ಕಳು ಕಲಿಯುತ್ತಿರುವ ಶಾಲಾ ಪರಿಸರ ಸ್ವಚ್ಛಗೊಳಿಸಿದ ತಂದೆ..!



ಪುತ್ತೂರು: ಶಾಲಾ ಎಸ್‌ಡಿಎಂಸಿ ಸದಸ್ಯರೋರ್ವರ ಶಾಲೆಯ ಮೇಲಿನ ಅಭಿಮಾನ, ಪ್ರೀತಿ ನಾಡಿಗೆ ಮಾದರಿಯಾಗಿದೆ. ತನ್ನ ಮಕ್ಕಳು ಕಲಿಯುವ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ಅವರು ಮಾದರಿಯಾಗಿದ್ದಾರೆ. ಅವರೇ ಮುಕ್ವೆ ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಸದಸ್ಯರಾಗಿರುವ ಪುರುಷರಕಟ್ಟೆ ನಿವಾಸಿ ಶೇಕ್ ಮಹಮ್ಮದ್ ಹನೀಫ್.

ಶೇಕ್ ಮಹಮ್ಮದ್ ಹನೀಫ್ ಎಂಬವರು ಶಾಲಾ ಪರಿಸರದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ಯಂತ್ರದ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ತೆರವುಗೊಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಈ ಹಿಂದೆಯೂ ಶಾಲಾ ಪರಿಸರ, ಅಂಗನವಾಡಿ ಪರಿಸರ ಹಾಗೂ ಮದ್ರಸ ಪರಿಸರವನ್ನು ಸ್ವಚ್ಚಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇವರ ಈ ಕಾರ್ಯಕ್ಕೆ ಶಾಲಾ ಶಿಕ್ಷಕ ವೃಂದದವರು, ಊರವರು ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಮೂವರು ಮಕ್ಕಳು ಮುಕ್ವೆ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಮ್ಮ ಮನೆಯ ಪರಿಸರವನ್ನು ನಾವು ಸ್ವಚ್ಛವಾಗಿಡುವಂತೆ ಶಾಲೆಯ ಪರಿಸರವನ್ನೂ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ ಎಂದು ಶೇಕ್ ಮಹಮ್ಮದ್ ಹನೀಫ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!