ವಿದ್ಯುತ್ ಬಿಲ್ ಕಟ್ಟಲು ಹೋದ ಮಹಿಳೆ ನಾಪತ್ತೆ
ಕೆಇಬಿ ಕಚೇರಿಗೆ ಕರೆಂಟ್ ಬಿಲ್ ಕಟ್ಟಲು ಹೋದ ಮಹಿಳೆ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀರಿನ್ ಬಾನು ಅಲ್ತಾಫ್ ಮೈದಿನ್ ಸಾಬ್ (40. ವ )ನಾಪತ್ತೆಯಾದವರು.

ಜೂನ್ 22 ರಂದು ಮನೆಯಿಂದ ಹೊರ ಹೋದವರು ಮರಳಿ ಬಂದಿಲ್ಲ. 5.1 ಅಡಿ ಎತ್ತರ, ದುಂಡುಮುಖ, ಹುಬ್ಬಿನ ಮೇಲೆ ಹಳೆ ಗಾಯದ ಕಲೆ ಹೊಂದಿದ್ದು ಗೋದಿ ಮೈಬಣ್ಣದವಳಾಗಿದ್ದಾಳೆ. ಉರ್ದು, ಹಿಂದಿ, ಕನ್ನಡ ಮಾತನಾಡುತ್ತಾರೆ. ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ 9480805255 ಗೆ ಸಂಪರ್ಕಿಸುವಂತೆ ಪೋಲೀಸರು ವಿನಂತಿಸಿದ್ದಾರೆ.