ಸುಳ್ಯ: ಅಪಘಾತ ಸಂಭವಿಸಿದ ಸ್ಥಳದಿಂದ ಇನ್ನೂ ತೆರವಾಗದ ವಾಹನ: ಸಾರ್ವಜನಿಕರ ಆಕ್ರೋಶ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ರಸ್ತೆಯಲ್ಲಿ ಇಂದು (ಜೂ.2) ಬೆಳಿಗ್ಗೆ 11.30 ರ ವೇಳೆಗೆ ಕಾರು ಮತ್ತು ಬೈಕ್ ನಡುವೆ ಅಫಘಾತ ಸಂಭವಿಸಿ ಎರಡು ವಾಹನದ ಸವಾರರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಇಂದು ಬೆಳಿಗ್ಗೆ ವರದಿಯಾಗಿತ್ತು.
ಆದರೆ ಅಪಘಾತ ಕಳೆದು ಸುಮಾರು ಏಳು ಗಂಟೆ ಕಳೆದರೂ ರಸ್ತೆಯಲ್ಲಿ ಬಿದ್ದಿದ್ದ ವಾಹನಗಳ ತೆರವು ಮಾಡದೆ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾತ್ರಿ ಸಮಯದಲ್ಲಿ ವಾಹನಗಳ ಸಂಚಾರ ಜಾಸ್ತಿಯಾಗಿರುವುದರಿಂದ ಮತ್ತೆ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು ಪೋಲಿಸ್ ಇಲಾಖೆ ಶೀಘ್ರ ಈ ವಾಹನಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.