ಪುತ್ತೂರು: ಮುಸ್ಲಿಮರು ನಮಾಜ್ ಮಾಡುವ ಅಶ್ಲೀಲ ಭಂಗಿಯ ಕಾರ್ಟೂನ್ ರಚಿಸಿ ಅವಹೇಳನ; ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು
ಪುತ್ತೂರು: ಮುಸ್ಲಿಮರು ನಮಾಜು ಮಾಡುವುದರ ಕುರಿತು ಅಶ್ಲೀಲ ಭಂಗಿಯಲ್ಲಿ ಕಾರ್ಟೂನ್ ರಚಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಹರಿಯಬಿಟ್ಟು, ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಚ್ಯುತಿ ತಂದಿರುವುದರ ವಿರುದ್ಧ ಮುಸ್ಲಿಂ ಯುವಜನ ಪರಿಷತ್ ನಿಂದ ಡಿವೈಎಸ್‌ಪಿ ಡಾ. ಗಾನಾ ಪಿ ಕುಮಾರ್ ರವರಿಗೆ ದೂರು ನೀಡಿದ್ದಾರೆ.

ಸುದೀಪ್ ಎಂಬಾತ, ವಾಟ್ಸಪ್ ಗ್ರೂಪ್‌ನಲ್ಲಿ ಮುಸ್ಲಿಮರು ನಮಾಜು ಮಾಡುವುದನ್ನು ಅಶ್ಲೀಲ ಭಂಗಿಯಲ್ಲಿ ಕಾರ್ಟೂನ್ ರಚಿಸಿ ಅದನ್ನು ‘ಅರುಣ್ ಪುತ್ತಿಲ ಪಾಣಾಜೆ ಬ್ರಿಗೇಡ್” ಗ್ರೂಪ್ ನಲ್ಲಿ ಮುಸ್ಲಿಮರ ಭಾವನಗಳಿಗೆ ಚ್ಯುತಿ ಹಾಗೂ ಭಂಗ ತಂದಿದ್ದಾರೆ. ಇದು ನಮಗೆ ತೀವ್ರ ನೋವುಂಟು ಮಾಡಿದೆ ಮಾತ್ರವಲ್ಲದೆ ಇದು ಸಮಾಜದಲ್ಲಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ.ಹೀಗಾಗಿ ಅವರ ಮೇಲೆ ಸೂಕ್ತ ಉನೂನು ಕ್ರಮ ಕೈಗೊಳ್ಳುವಂತೆ ಮುಖ್ಯ ಯುವಜನ ಪರಿಷತ್ ವತಿಯಿಂದ ದೂರಿನಲ್ಲಿ ತಿಳಿಸಿದ್ದಾರೆ. ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಉಪಾಧ್ಯಕ್ಷ ಇಬ್ರಾಹಿಂ ಸಾಗರ್,
ನೌಷದ್, ಜೈನುದ್ದೀನ್ ವಿಟ್ಲ ದೂರು ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು