ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಅಂಚೆ ಮತದಾನದ ವಿವರ ಇಲ್ಲಿದೆ
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 2397 ಅಂಚೆ ಮತಗಳು ಚಲಾವಣೆಯಾಗಿದೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 830 ಅಂಚೆ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು 825 ಅಂಚೆ ಮತಗಳನ್ನು ಪಡೆದಿದ್ದಾರೆ. ವಿಜೇತ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು 684 ಅಂಚೆ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಜೆಡಿಎಸ್ ನ ದಿವ್ಯಪ್ರಭಾ 18, ಎಸ್ ಡಿ ಪಿ ಐ ಪಕ್ಷದ ಶಾಫಿ ಬೆಳ್ಳಾರೆ 15, ಆಮ್ ಆದ್ಮಿ ಪಾರ್ಟಿಯ ಡಾ.ವಿಶುಕುಮಾರ್ 6, ಐವನ್ ಫೆರಾವೋ 4, ಸುಂದರ ಕೊಯಿಲ 5 ಮತ್ತು ನೋಟಾಗೆ 10 ಮತಗಳು ಚಲಾವಣೆಯಾಗಿದೆ.