ಕುಂದಾಪುರದ ಹೊಳೆಯಲ್ಲಿ ಮುಳುಗಿದ್ದ ಸುಳ್ಯದ ಯುವಕನ ಮೃತದೇಹ ಪತ್ತೆ
ಕುಂದಾಪುರದ ಹೊಳೆಯಲ್ಲಿ ಮುಳುಗಿದ್ದ ಸುಳ್ಯ ಐವರ್ನಾಡಿನ ಯುವಕನ ಮೃತದೇಹ ಪತ್ತೆಯಾಗಿದೆ.

ಸ್ನಾನಕ್ಕೆಂದು ಹೊಳೆಗೆ ಇಳಿದಿದ್ದ ಸುಹಾಸ್ ಎಂಬವರು ನಾಪತ್ತೆಯಾಗಿರುವ ಘಟನೆ ಮೇ.5ರಂದು ನಡೆದಿದ್ದು ಇಂದು ಬೆಳಿಗ್ಗೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಅಗ್ನಿ ಶಾಮಕ ದಳದವರು ಮತ್ತು ಮುಳುಗು ತಜ್ಞರ ಹುಡುಕಾಟದ ಪ್ರಯತ್ನದಿಂದ ನದಿಗೆ ಇಳಿದ 300 ಮೀ ಅಂತರದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್.ಎಂ. (21. ವ) ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದಾಗ ದುರ್ಘಟನೆ ನಡೆದಿದೆ.