ಸವಣೂರು: ಚುನಾವಣಾ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷ
ಪುತ್ತೂರು: ಸವಣೂರು ಗ್ರಾಮದ ಪೆರಿಯಡ್ಕ, ಪಲ್ಲತಮೂಲೆಯಲ್ಲಿ ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಲಾಗಿದೆ.
ಪೆರಿಯಡ್ಕ,ಪಲ್ಲತಮೂಲೆ ಕುಡಿಯುವ ನೀರಿನ ಬಳಕೆದಾರರ ಬಹು ಕಾಲದ ಬೇಡಿಕೆಯಾಗಿದ್ದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅನುಮೋದನೆಗೊಂಡಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಪಲ್ಲತ್ತಮೂಲೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಪ್ರಾರಂಭಿಸಿದಾಗ ಸ್ಥಳೀಯ ವ್ಯಕ್ತಿಯೋರ್ವರು ಆಕ್ಷೇಪಣೆಯನ್ನು ನೀಡಿದಾಗ ಪುರಸ್ಕರಿಸಿ ಸದ್ರಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಮೀನಮೇಷ ಎಣಿಸಿದುದರಿಂದ ಸ್ಥಳೀಯ ಕುಡಿಯುವ ನೀರಿನ ಬಳಕೆದಾರರಾದ ನಾವು ಈ ಬಾರಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ಅಳವಡಿಸಿದ್ದಾರೆ.