ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥ್ ಅವರ ಆಡಳಿತವನ್ನು ಬಿಜೆಪಿ ತರಲಿದೆ : ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಢಮ್ ಢಮ್ -ಯತ್ನಾಳ್
‘ಕರ್ನಾಟಕದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತವನ್ನು ಬಿಜೆಪಿ ತರಲಿದ್ದು ನಮ್ಮ ಹಿಂದೂ ಧರ್ಮ ಹಾಗೂ ಭಾರತದ ಬಗ್ಗೆ ಯಾರಾದರೂ ಮಾತನಾಡಿದರೆ ಅಲ್ಲೇ ಢಂ… ಢಂ…’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಕುಂದಗೋಳ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ ಪರ ಪ್ರಚಾರ ನಡೆಸಿದ ಅವರು, ‘ಉತ್ತರ ಪ್ರದೇಶದ ಜೈಲುಗಳಿಗೆ ಈಗ ಬಾಗಿಲುಗಳನ್ನು ಹಾಕುವುದನ್ನೇ ಬಿಟ್ಟಿದ್ದಾರೆ. ಏಕೆಂದರೆ ಕೈದಿಗಳೇ ಹೊರಗೆ ಹೋಗಲು ಇಚ್ಛಿಸುತ್ತಿಲ್ಲ. ಇಂಥ ಆಡಳಿತ ಕರ್ನಾಟಕದಲ್ಲೂ ತರುತ್ತೇವೆ. ಏನಾದರೂ ಆದರೆ ಶೂಟ್ ಮಾಡಲಾಗುವುದು’ ಎಂದು ಹೇಳಿದರು.