ಉಳ್ಳಾಲ: ಕುಟುಂಬಸ್ಥರ ಜೊತೆ ಬೀಚ್ ಗೆ ತೆರಳಿದ್ದ ವ್ಯಕ್ತಿ ಸಮುದ್ರ ಪಾಲು
ಉಳ್ಳಾಲ: ತನ್ನ ಕುಟುಂಬದ ಜೊತೆ ಉಳ್ಳಾಲ ದರ್ಗಾ ಝಿಯಾರತ್ ಗೆಂದು ತೆರಳಿದ್ದ ವ್ಯಕ್ತಿಯೋರ್ವರು ಸಮುದ್ರ ಪಾಲಾದ ಘಟನೆ ಎ.24ರಂದು ಉಳ್ಳಾಲ ಬೀಚ್ ನಲ್ಲಿ ನಡೆದಿದೆ.
ಸಮುದ್ರ ಪಾಲಾದ ವ್ಯಕ್ತಿಯನ್ನು ಮಳಲಿ ನಿವಾಸಿ ಖಾಲಿದ್ (50. ವ) ಎಂದು ಗುರುತಿಸಲಾಗಿದೆ.
ಖಾಲಿದ್ ಅವರು ತನ್ನ ಪತ್ನಿ, ಮಕ್ಕಳ ಜೊತೆ ಉಳ್ಳಾಲ ಝಿಯಾರತ್ ಗೆಂದು ತೆರಳಿದ್ದರು.ಝಿಯಾರತ್ ಮುಗಿಸಿದ ಬಳಿಕ ಉಳ್ಳಾಲ ಬೀಚ್ ಗೆ ವಿಹಾರಕ್ಕೆ ಹೋಗಿ ಸಮುದ್ರಕ್ಕೆ ಇಳಿದಿದ್ದರು.ಈ ವೇಳೆ ಸಮುದ್ರ ಅಲೆಗೆ ಖಾಲಿದ್ ಹಾಗೂ ಅವರ ಮಗ ಸಿಲುಕಿ ಸಮುದ್ರಪಾಲಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಈಜುಗಾರರು ಬಾಲಕನಿಗೆ ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಖಾಲಿದ್ ರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಆ ವೇಳೆಗೆ ಸಮುದ್ರ ಪಾಲಾಗಿದ್ದಾರೆ.ಬಳಿಕ ಮೃತದೇಹ ಮೇಲಕ್ಕೆತ್ತಲಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.