ಕರಾವಳಿ

ಪುತ್ತೂರು: ಇವರ ರಿಕ್ಷಾದಲ್ಲಿ ಪ್ರಯಾಣಿಸಿದರೆ ನಿಮಗೆ ಜ್ಯೂಸ್ ಫ್ರೀ…!



ಪುತ್ತೂರು: ಪುತ್ತೂರು ನಗರದ ರಿಕ್ಷಾವೊಂದರಲ್ಲಿ ನೀವು ಪ್ರಯಾಣ ಮಾಡಿದರೆ ನಿಮಗೆ ಜ್ಯೂಸ್ ಫ್ರೀಯಾಗಿ ಕುಡಿಯಬಹುದು. ತಂಪಾದ ತಾಜಾ ಪುನರ್ಪುಳಿ ಜ್ಯೂಸ್ ದೊರೆಯುವ ರಿಕ್ಷಾ ನೆಹರೂ ನಗರದ ಚಾಲಕ ಸುನಿಲ್ ಎಂಬವರಿಗೆ ಸೇರಿದ್ದು. ಪುತ್ತೂರು ನಗರ ಸೇರಿದಂತೆ ಜಿಲ್ಲೆಯಾಧ್ಯಂತ ಬಿಸಿಲ ತಆಪ ಜೋರಾಗಿಯೇ ಇದೆ. ಮನೆಯಿಂದ ಹೊರಗೆ ಬರಲಾರದಷ್ಟು ತಾಪ ಇದೆ.

ಇದಕ್ಕಾಗಿ ತನ್ನ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾನಿಕರಿಗೆ ತನ್ನ ರಿಕ್ಷಾದ ಒಂದು ಭಾಗದಲ್ಲಿ ಪುನರ್ಪುಳಿ ಜ್ಯೂಸ್ ಇಡಲಾಗಿದೆ. ಸುಮಾರು 15 ಲೀಟರ್ ಸಾಮರ್ಥ್ಯದ ಸಣ್ಣ ಫೈಬರ್ ಟ್ಯಾಂಕ್‌ನಲ್ಲಿ ಜ್ಯೂಸ್ ತುಂಬಿಸಲಾಗಿದೆ. ಕುಡಿಯುವಾಗ ತಂಪಾಗಿರಲೆಂದು ಐಸ್ ತುಂಡುಗಳನ್ನೂ ಹಾಕುತ್ತಾರೆ. ಬೇಸಿಗೆಯಲ್ಲಿ ಜ್ಯೂಸ್ ಉಳಿದ ಸಮಯದಲ್ಲಿ ಅದೇ ಟ್ಯಾಂಕ್‌ನಲ್ಲಿ ಕುಡಿಯುವ ನೀರು ಇದ್ದೇ ಇರುತ್ತದೆ.
ಕಳೇದ 6 ವರ್ಷಗಳಿಂದ ಪುತ್ತೂರು ನಗರದಲ್ಲಿ ರಿಕ್ಷಾ ಚಾಲಕರಾಗಿರುವ ಸುನಿಲ್ ಮೂಲತ ಕೇರಳದವರು.

ಆದರೆ ಕಳೆದ 6 ವರ್ಷಗಳಿಂದ ನೆಹರೂನಗರದಲ್ಲಿ ವಾಸ್ತವ್ಯವಿದ್ದಾರೆ. ಕಳೆದ ಎರಡು ವರ್ಷಗಳಿಂದ ಜ್ಯೂಸ್ ಕೊಡುವ ಸಮಾಜ ಸೇವೆಯನ್ನು ಆರಂಭಿಸಿದ್ದಾರೆ. ಇವರ ಸೇವೆಯನ್ನು ಪ್ರಯಾಣಿಕರು ಕೊಂಡಾಡಿದ್ದಾರೆ. ಬೇಸಿಗೆಯಲ್ಲಿ ಮತ್ರವಲ್ಲದೆ ವಿಶೇಷ ಹಬ್ಬಗಳ ಸಂದರ್ಬದಲ್ಲಿ, ಎಲ್ಲಾ ಧರ್ಮದ ಹಬ್ಬಗಳ ಸಂದರ್ಭದಲ್ಲಿಯೂ ರಿಕ್ಷಾದಲ್ಲಿ ಉಚಿತವಾಗಿ ಜ್ಯೂಸ್ ನೀಡುವ ಮೂಲಕ ಮಹಾನ್‌ಮಾನವತಾವಾಧಿಯಾಗಿ ಚಾಲಕ ಸುನಿಲ್ ಗುರುತಿಸಿಕೊಂಡಿದ್ದಾರೆ.

‘ರಿಕ್ಷಾದಲ್ಲಿ ಪ್ರಯಾಣಿಸುವವ ಪ್ರಯಾಣಿಕರಿಗೆ ಮಾತ್ರವಲ್ಲ ಇತರರಿಗೂ ಕುಡಿಯಬಹುದು. ಖಾಲಿಯಾದರೆ ಪುನ ತುಂಬಿಸುತ್ತೇನೆ. ಕೆಲವೊಮ್ಮೆ ಎರಡುಬಾರಿ ತುಂಬಿಸಬೇಕಾಗುತ್ತದೆ. ದಾಹ ಉಳ್ಳವನಿಗೆ ನೀರು ಕೊಡುವುದು ಅಥವಾ ಜ್ಯೂಸ್ ಕೊಡುವುದು ಪುಣ್ಯದಾಯಕವಾದ ಕಾರ್ಯವಾಗಿದೆ ಎಂಬುದನ್ನು ನಾನು ನಂಬಿದ್ದೇನೆ. ಪುತ್ತೂರು ದೇವರ ಜಾತ್ರೋತ್ಸವದ ಪ್ರಯುಕ್ತ ಪ್ರತೀ ವರ್ಷ ಸ್ಪೆಶಲ್ ಆಗಿ ಜ್ಯೂಸ್ ಮಾಡುತ್ತೇನೆ ಎನ್ನುತ್ತಾರೆ ರಿಕ್ಷಾ ಚಾಲಕ ಸುನಿಲ್

Leave a Reply

Your email address will not be published. Required fields are marked *

error: Content is protected !!