ಸುಳ್ಯದ ಸೋಲಿಲ್ಲದ ಸರದಾರ ಅಂಗಾರಗೆ ‘ಬಂಗಾರ’ದಂತ ಅವಕಾಶ ತಪ್ಪಿದ್ದೇಕೆ?
ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಳೆದ ಹಲವಾರು ದಿನಗಳಿಂದ ಹಾವು ಏಣಿ ಆಟದ ರೀತಿಯಲ್ಲಿ ಕುತೂಹಲ ಮೂಡಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ತೆರೆ ಕಂಡಿದೆ.
ಕಳೆದ ಆರು ಅವಧಿಗಳಲ್ಲಿ ಸುಳ್ಯದ ಸೋಲಿಲ್ಲದ ಸರದಾರನಾಗಿ ಮಿಂಚಿದ್ದ ಬಂಗಾರ ಖ್ಯಾತಿಯ ಅಂಗಾರರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಮಣೆ ಹಾಕಲಿಲ್ಲ.ಮಂಗಳವಾರ ರಾತ್ರಿ ವೇಳೆ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು ಅದರಲ್ಲಿ ಸಚಿವ ಎಸ್. ಅಂಗಾರ ಅವರನ್ನು ಅವರನ್ನು ಕೈ ಬಿಡಲಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಸುಳ್ಯದಿಂದ ಮಹಿಳಾ ಅಭ್ಯರ್ಥಿಗೆ ಈ ಬಾರಿ ಅವಕಾಶ ನೀಡಿದ್ದು ಭಾಗಿರತಿಯವರ ಹೆಸರು ಅಂತಿಮಗೊಂಡಿದೆ.
ಅಂಗಾರ ಅವರಿಗೆ ಟಿಕೆಟ್ ತಪ್ಪಲು ಕಾರಣ ತಿಳಿದು ಬಂದಿಲ್ಲ. ಸ್ವಪಕ್ಷೀಯರೇ ಅಂಗಾರ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದ್ದು ಅದೇ ಕಾರಣಕ್ಕೆ ಟಿಕೆಟ್ ತಪ್ಪಿದೆ ಎಂದು ತಿಳಿದು ಬಂದಿದೆ. ಮಾತ್ರವಲ್ಲದೇ ಸುಳ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳು ಪ್ರತ್ಯಕ್ಷಗೊಂಡಿತ್ತು. ಇದೆಲ್ಲವೂ ಅವರ ಹಿನ್ನಡೆಗೆ ಕಾರಣವಾಗಿದೆ.