ಗಲ್ಫ್ ಟೂರ್ಸ್ & ಟ್ರಾವೆಲ್ಸ್
ಆಯೋಜಿಸಿದ ಪಶ್ಚಿಮ ಏಷ್ಯಾ ರಾಷ್ಟ್ರಗಳ ಝಿಯಾರತ್ ಟೂರ್ ಪವಿತ್ರ ಬೈತುಲ್ ಮುಖದ್ದಸ್ ನಲ್ಲಿ ಜುಮಾ ನಮಾಝ್ ನಿರ್ವಹಿಸಿದ ಯಾತ್ರಿಕರು
ಗಲ್ಫ್ ಟೂರ್ಸ್ & ಟ್ರಾವೆಲ್ಸ್
ಆಯೋಜಿಸಿದ ಪಶ್ಚಿಮ ಏಷ್ಯಾ ರಾಷ್ಟ್ರಗಳ ಝಿಯಾರತ್ ಟೂರ್ ನಲ್ಲಿರುವ ತಂಡವು ‘ಮಕ್ಕಾ ಮದೀನಾದ ಬಳಿಕದ ಪವಿತ್ರ ನಗರವೂ, ಒಬ್ಬ ಸತ್ಯ ವಿಶ್ವಾಸಿಯು ಸಂದರ್ಶಿಸಲು ಹಾತೊರೆಯುವ ಪವಿತ್ರ ಬೈತುಲ್ ಮುಖದ್ದಸ್ ತಲುಪಿ ಇಂದು(ಮಾ.17)ಮಸ್ಜಿದುಲ್ ಅಕ್ಸಾದಲ್ಲಿ ಜುಮಾ ನಮಾಝ್ ನಲ್ಲಿ ಭಾಗವಹಿಸಿದರು.

ಇರಾಕಿನ ಬಗ್ದಾದ್ ನಿಂದ ಪ್ರಾರಂಭಗೊಂಡ ಝಿಯಾರತ್ ಯಾತ್ರೆಯಲ್ಲಿ ಯಾತ್ರಿಕರು ಎಲ್ಲಾ ಮಹಾತ್ಮರುಗಳನ್ನು ಚಾರಿತ್ರಿಕ ಸ್ಥಳಗಳನ್ನೂ ಸಂದರ್ಶಿಸುತ್ತಾ ಗುರುವಾರ ಲುಹ್ರ್ ನಮಾಝ್ ಗೆ ಮಸ್ಜಿದುಲ್ ಅಕ್ಸಾ ತಲುಪಿ,ಎರಡು ದಿನಗಳಲ್ಲಿ ಅಕ್ಸಾ ಮಸೀದಿಯಲ್ಲೇ ಅಧಿಕ ಸಮಯವನ್ನು ಆರಾಧನೆಗಳಿಗೆ ವ್ಯಯಿಸಿ ಧನ್ಯಗೊಂಡರು.

ಜುಮಾ ದಿನದ ರಾತ್ರಿ ಹಾಗೂ ಸುಬಹಿ ನಮಾಝನ್ನು ಅಕ್ಸಾದಲ್ಲಿ ಜಮಾಅತ್ತಾಗಿ ನಿರ್ವಹಿಸಿ, ಬೆಳಗ್ಗಿನಿಂದ ಜುಮಾ ನಮಾಝ್ ತನಕ ಮಸೀದಿಯಲ್ಲೇ ಇದ್ದು , ವಿಶೇಷ ಆರಾಧನೆ ಹಾಗೂ ದುಆಃದಲ್ಲಿ ಪಾಲ್ಗೊಂಡರು. ಮಸೀದಿ ಹಾಗೂ ಸುತ್ತಲಿರುವ ಚರಿತ್ರೆ ಸ್ಮಾರಕಗಳನ್ನು ಸಂಪೂರ್ಣ ವಿವರಗಳೊಂದಿಗೆ ವೀಕ್ಷಿಸಿದರು.

ಅಂಬಿಯಾ ಸ್ವಹಾಬಾ ಕಿರಾಮ್ ಹಾಗೂ ಮಹಾತ್ಮರುಗಳ ಝಿಯಾರತ್ ಗಳನ್ನು ಮುಗಿಸಿ ಮಾ.18ರಂದು ಈಜಿಪ್ಟ್ ತಲುಪಲಿದ್ದಾರೆ.