ಕರಾವಳಿಕ್ರೈಂರಾಜಕೀಯ

ಕುಂಬ್ರ ಜಂಕ್ಷನ್’ನಲ್ಲಿ ಅಳವಡಿಸಿದ್ದ ಎಸ್.ಡಿ.ಪಿ.ಐ ಚುನಾವಣಾ ಪ್ರಚಾರದ ಬ್ಯಾನರ್ ಕಳ್ಳತನ| ಪೊಲೀಸ್ ದೂರು



ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬ್ರ ಜಂಕ್ಷನ್ನಲ್ಲಿ ಪಂಚಾಯತ್ ಅನುಮತಿಯೊಂದಿಗೆ ಅಳವಡಿಸಿರುವ ಎಸ್ ಡಿ ಪಿ ಐ ಚುನಾವಣಾ ಪ್ರಚಾರದ ಬ್ಯಾನರನ್ನು ಮಾ.15ರಂದು ರಾತ್ರಿ ಕಳವು ಮಾಡಿದ್ದು ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಮಾ.15ರಂದು ಅಳವಡಿಸಿದ ಬ್ಯಾನರ್ ಅಂದೇ ರಾತ್ರಿ ಕಳ್ಳತನವಾಗಿದ್ದು ಈ ಬಗ್ಗೆ ಸಿಸಿ ಟಿವಿಯನ್ನು ಪರಿಶೀಲಿಸಿ ಸಮಾಜದಲ್ಲಿ ಶಾಂತಿ ಕದಡುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್.ಡಿ. ಪಿ.ಐ ಕುಂಬ್ರ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಎಂಬವರು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!