ಟರ್ಕಿ ಭೂಕಂಪದಿಂದ ಭಾರೀ ನಷ್ಟ: ನಿರಾಶ್ರಿತರಾಗಿರುವ ಲಕ್ಷಾಂತರ ಮಂದಿ ಟೆಂಟ್’ಗಳಲ್ಲಿ ವಾಸ
ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಉಂಟಾದ ನಷ್ಟವು ಸುಮಾರು 100 ಶತಕೋಟಿ ಡಾಲರ್‌ಗಳನ್ನು ಮೀರುತ್ತದೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ವರದಿ ಮಾಡಿದೆ.
ಫೆ. 6 ರಂದು ಸಂಭವಿಸಿದ ಭೂಕಂಪದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಒಟ್ಟು 50,000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿರಾರು ಮನೆಗಳು ಮತ್ತು ಇತರ ಕಟ್ಟಡಗಳು ನಾಶವಾಗಿದ್ದವು.
ಸುಮಾರು 15 ಲಕ್ಷ ಜನರು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಸುಮಾರು 46,000 ಜನರು ಕಂಟೈನರ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ.