ಉಡುಪಿ ಪವರ್ ಕಾರ್ಪೋರೇಶನ್ ಕಂಪನಿ ಸ್ವಾಧೀನ ಪಡೆದ ಭೂಮಿಗೆ ಹಣ ಪಾವತಿಸಿಲ್ಲ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು
ಬೆಂಗಳೂರು: ಫೆ.14ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಹಿರಿಯ ಸದಸ್ಯ ಬಿ.ಎಂ ಫಾರೂಕ್ ರವರು ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರ್ ಮತ್ತು ಸಾಂತೂರ್ ಗ್ರಾಮಗಳಲ್ಲಿ ಒಟ್ಟು 576.45ಎಕ್ರೆ ಹೆಚ್ಚುವರಿ ಭೂಮಿಯನ್ನು ಯುಪಿಸಿಎಲ್ ಗೆ ನೀಡಲಾಗಿದ್ದು ಅದು ಬಳಕೆಯಾಗದ ಬಗ್ಗೆ ಸರಕಾರದ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಬೃಹತ್ ಕೈಗಾರಿಕ ಸಚಿವ ನಿರಾಣಿ ಯವರು ಸರಕಾರ ಪದೇ ಪದೇ ನೋಟೀಸ್ ನೀಡಿದರೂ ಉಡುಪಿ ಪವರ್ ಕಂಪನಿ ರೂ 341.59 ಕೋಟಿ ಪಾವತಿಸಿಲ್ಲ ಎಂದು ಒಪ್ಪಿಕೊಂಡರು.
ಹಾಗಿದ್ದಲ್ಲಿ ಭೂಮಿಯನ್ನು ಮರು ಸ್ವಾದಿನ ಪಡಿಸಿ ಅಭಿವೃದ್ಧಿ ಗೊಳಿಸಿ ಇತರ ಅರ್ಹರಿಗೆ ಹಂಚುವಂತೆ ಈ ಸಂದರ್ಭದಲ್ಲಿ ಬಿ ಎಮ್ ಫಾರೂಕ್ ಸಲಹೆ ನೀಡಿದರು.