ಪುತ್ತೂರು: ಸರ್ವೆಯಲ್ಲಿ ಬೈಕ್ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ
ಪುತ್ತೂರು: ಸರ್ವೆಯಲ್ಲಿ ಬೈಕ್ ಪಲ್ಟಿಯಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಜ.28ರಂದು ರಾತ್ರಿ ನಡೆದಿದೆ.

ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ ಸರ್ವೆ ತಿರುವಿನಲ್ಲಿ ಪಲ್ಟಿಯಾಗಿದ್ದು ಬೈಕ್ ನಲ್ಲಿದ್ದ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ಪಲ್ಟಿಯಾದ ವೇಳೆ ಸವಾರರಿಬ್ಬರೂ ರಸ್ತೆ ಬದಿಗೆ ಎಸೆಯಲ್ಪಟ್ಟಿದು ಕೆಲ ಹೊತ್ತು ಅಲ್ಲೇ ನರಳಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೈಕ್ ಪಲ್ಟಿಯಾಗಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಸಂದರ್ಭದಲ್ಲಿ ಅನೇಕ ವಾಹನದವರು ಬಂದಿದ್ದರಾದರೂ ಯಾರು ಕೂಡಾ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿರಲಿಲ್ಲ.
ಬಳಿಕ ಸವಣೂರಿನಿಂದ ಬಂದ ಆಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.






