ನೆಲಮಂಗಲ ನಗರಸಭೆಯ ಅಧ್ಯಕ್ಷೆ ಸಹಿತ 11 ಸದಸ್ಯರು ಕಾಂಗ್ರೆಸ್ ಸೇರ್ಪಡೆ..!
ಬೆಂಗಳೂರು: ನೆಲಮಂಗಲ ನಗರಸಭೆಯ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ಸಹಿತ ಜೆಡಿಎಸ್ ನ 11 ಸದಸ್ಯರು ಶ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಎಲ್ಲರೂ ಕಾಂಗ್ರೆಸ್ ಸೇರಿದರು.
ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ 14 ಸದಸ್ಯರನ್ನು ಹೊಂದಿತ್ತು. 11 ಸದಸ್ಯರ ಪಕ್ಷಾಂತರದೊಂದಿಗೆ ಈಗ ಮೂವರು ಜೆಡಿಎಸ್ ನಲ್ಲಿ ಉಳಿದುಕೊಂಡಿದ್ದಾರೆ. ಈ ಮೂಲಕ ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ.