ಕರಾವಳಿಕ್ರೈಂ

ಕುಂಬ್ರದಲ್ಲಿ ಮುಂದುವರಿದ ಹೆಲ್ಮೆಟ್ ಕಳ್ಳರ ಕೈ ಚಲಕ:
ಸ್ಕೂಟರ್‌ನಲ್ಲಿಟ್ಟಿದ್ದ ಪತ್ರಕರ್ತನ ಹೆಲ್ಮೆಟ್ ಮಾಯ..!



ಪುತ್ತೂರು: ಕುಂಬ್ರದಲ್ಲಿ ಹೆಲ್ಮೆಟ್ ಕಳ್ಳರ ಹಾವಳಿ ಮುಂದುವರಿದಿದೆ. ಸ್ಕೂಟರ್‌ನಲ್ಲಿ ಇಟ್ಟಿದ್ದ ಹೆಲ್ಮೆಟ್ ಅನ್ನು ಕಳವು ಮಾಡಿದ ಘಟನೆ ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನ ವಠಾರದಲ್ಲಿ ನಡೆದಿದೆ.


ಕಾಂಪ್ಲೆಕ್ಸ್‌ ಮುಂಭಾಗದಲ್ಲಿ ನಿಲ್ಲಿಸಿದ್ದ ಪತ್ರಕರ್ತ ಸಿದ್ದಿಕ್ ಕುಂಬ್ರರವರ ಸ್ಕೂಟರ್‌ನಲ್ಲಿಟ್ಟಿದ್ದ ಹೆಲ್ಮೆಟ್ ಅನ್ನು ಜ.18 ರಂದು ಸಂಜೆ ಕಳ್ಳರು ಕಳವು ಮಾಡಿದ್ದಾರೆ. ಸಿದ್ದಿಕ್ ಕುಂಬ್ರರವರು ಸಂಜೆ ವೇಳೆ ಪತ್ರಿಕೆಯ ಕಛೇರಿ ಎದುರು ಸ್ಕೂಟರ್ ನಿಲ್ಲಿಸಿ ಹೆಲ್ಮೆಟ್ ಅನ್ನು ಸ್ಕೂಟರ್‌ನಲ್ಲೇ ಇರಿಸಿ ಕಛೇರಿಯೊಳಗೆ ಕೆಲಸ ಮಾಡಿಕೊಂಡಿದ್ದರು.

ರಾತ್ರಿ 7 ಗಂಟೆ ಸುಮಾರಿಗೆ ಹೊರಗೆ ಬಂದು ನೋಡಿದಾಗ ಹೆಲ್ಮೆಟ್ ಕಳ್ಳತನ ಆಗಿರುವುದು ಕಂಡು ಬಂದಿದೆ. ಈ ಹಿಂದೆ ಕೂಡ ಇವರ ಹೆಲ್ಮೆಟ್ ಕಳವಾಗಿತ್ತು. ಕುಂಬ್ರ ಎಟಿಎಂ ಬಳಿ ಇರುವ ಸಿಸಿ ಕ್ಯಾಮರಾದಲ್ಲಿ ಕಳವು ಕೃತ್ಯ ದಾಖಲಾಗಿದ್ದು ಕಳ್ಳನನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ನೆರವು ಆಗಲಿದೆ.

ಇತ್ತೀಚೆಗೆ ಕೆಯ್ಯೂರು ಗ್ರಾ.ಪಂ ಸಿಬ್ಬಂದಿಯೋರ್ವರು ಕುಂಬ್ರದಲ್ಲಿ ನಿಲ್ಲಿಸಿ ಹೋಗಿದ್ದ ಸ್ಕೂಟರ್ ನಿಂದ ಹೆಲ್ಮೆಟ್ ಕಳವಾಗಿತ್ತು. ರಾಯಲ್ ದರ್ಬಾರ್ ಹೋಟೆಲ್ ಬಳಿಯಿಂದಲೂ ವ್ಯಕ್ತಿಯೊರ್ವರ ಹೆಲ್ಮೆಟ್ ಕಳ್ಳತನವಾಗಿತ್ತು.

Leave a Reply

Your email address will not be published. Required fields are marked *

error: Content is protected !!