ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ ಹೆಸರಿಡಲು ಎಸ್.ಡಿ.ಪಿ.ಐ ಆಗ್ರಹ
ಮಂಗಳೂರು: ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯರವರ ಹೆಸರು ನಾಮಕರಣ ಮಾಡಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅವರು ಸುರತ್ಕಲ್ ಭಾಗದ ಸರ್ವ ಸಮುದಾಯದ ಜನರು ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯರವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಮೊದಲು ಜಿಲ್ಲಾಧಿಕಾರಿ ಯವರಿಗೆ ಮತ್ತು ಮಂಗಳೂರು ಪಾಲಿಕೆಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ನಾಲ್ಕು ವರ್ಷಗಳಲ್ಲಿ ಈ ಭಾಗದ ಜನರಿಗೆ ಸಿಗದ ಶಾಸಕ ಭರತ್ ಶೆಟ್ಟಿಯವರು ಚುನಾವಣೆ ಹತ್ತಿರ ಬರುವಾಗ ಪ್ರತ್ಯಕ್ಷರಾಗಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಯಾಸೀನ್ ಹೇಳಿದರು.