ರಾಷ್ಟ್ರೀಯ

ವಂದೇ ಭಾರತ್ ಎಕ್ಸ್’ಪ್ರೆಸ್’ಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳು ಧ್ವಂಸಗೈದ ಕಿಡಿಗೇಡಿಗಳು



ಕೊಲ್ಕತ್ತಾ: ಹೌರಾದಿಂದ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ರೈಲಿನ ಕಿಟಕಿ ಗಾಜುಗಳನ್ನು ದ್ವಂಸ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದ ಕುಮಾರ್ ಗಂಜ್’ನಲ್ಲಿ ನಡೆದಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್ ಗೆ ಭಾರತದ 7 ನೇ ವಂದೇ ಭಾರತ್ ಎಕ್ಸ್’ಪ್ರೆಸ್ ಹಸಿರು ನಿಶಾನೆ ತೋರಿದ ರೈಲು ಇದಾಗಿದ್ದು, ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.
ದಕ್ಷಿಣ ಬಂಗಾಳದಿಂದ ಉತ್ತರ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ಎಕ್ಸ್’ಪ್ರೆಸ್ ರೈಲನ್ನು ಡಿಸೆಂಬರ್ 30, 2022 ರಂದು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಹೌರಾದಿಂದ ಔಪಚಾರಿಕವಾಗಿ ಚಾಲನೆ ನೀಡಲಾಗಿತ್ತು.


ವಂದೇ ಭಾರತ್ ಎಕ್ಸ್’ಪ್ರೆಸ್ 7.45 ನಿಮಿಷಗಳಲ್ಲಿ 564 ಕಿಲೋ ಮೀಟರ್ ದೂರ ಕ್ರಮಿಸುತ್ತದೆ.ಪ್ರಯಾಣಿಕರಿಗೆ ಉತ್ತಮ ಪ್ರಯೋಜನ ವಾಗಿರುವ ಈ ರೈಲಿಗೆ ಅಲ್ಲಲ್ಲಿ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದಾರೆ.


ಕಲ್ಲು ತೂರಾಟದಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ. ಕಿಟಿಕಿಯ ಗಾಜು ಒಡೆದು ಹೋಗಿದೆ. ಯಾರಿಗೂ ಗಾಯಗಳಾಗಿಲ್ಲ. ರೈಲ್ವೆ ಸಂರಕ್ಷಣಾ ಪಡೆ ಈ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!