ಕರಾವಳಿ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಜಾತ್ರೋತ್ಸವದಲ್ಲಿ ಸಂತೆ ವ್ಯಾಪಾರಸ್ಥರಿಗೆ ಮುಕ್ತ ಅವಕಾಶದ ನಿರ್ಣಯ ಅಭಿನಂದನಾರ್ಹ : ಕೆ ಎಸ್ ಉಮ್ಮರ್

ಹಿಂದೂ ಜಾಗರಣ ವೇದಿಕೆ ಸುಳ್ಯ ಸಂಘಟನೆಯ ಹೆಸರಿನಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂಬ ಫಲಕವನ್ನು ದೇವಸ್ಥಾನದ ಪರಿಸರದಲ್ಲಿ ಅಳವಡಿಸಲಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು.

ಆದರೆ ಜನವರಿ 2 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಸಮಿತಿ ಜಾತ್ರೋತ್ಸವದ ಪೂರ್ವ ಸಿದ್ಧತೆಯ ಬಗ್ಗೆ ನಡೆಸಿದ ಸಭೆಯಲ್ಲಿ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಮುಕ್ತ ಅವಕಾಶವನ್ನು ನೀಡುವ ನಿರ್ಣಯವನ್ನು ಕೈಗೊಂಡಿದೆ.
ಈ ನಿರ್ಣಯವನ್ನು ಸ್ವಾಗತಿಸಿರುವ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಪತ್ರಿಕಾ ಪ್ರಕಟಣೆಯನ್ನು ನೀಡಿ ‘ಸುಳ್ಯದಲ್ಲಿ ವರ್ಷಂಪ್ರತೀ ನಡೆಯುವ ಜಾತ್ರೆಯಲ್ಲಿ ಜಾತಿ ಮತ ಬೇಧ ಬಾವವಿಲ್ಲದೆ ಎಲ್ಲರೂ ವ್ಯಾಪಾರ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಆದರೇ ಈ ವರ್ಷ ಜಾತ್ರೆಗೆ ಮುಂಚೆನೇ ದೇವಸ್ಥಾನ ವಠಾರದಲ್ಲಿ ಇತರ ಧರ್ಮದ ಜನರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಬ್ಯಾನರ್ ರನ್ನು ಒಂದು ಸಂಘಟನೆಯ ಹೆಸರಿನಲ್ಲಿ ಹಾಕಲಾಗಿತ್ತು.
ಈ ಬಗ್ಗೆ ಪರ ವಿರೋಧ ಚರ್ಚೆಗಳು ಸೋಶಿಯಲ್ ಮಿಡಿ ಯಾಗಳಲ್ಲಿ ನಡೆಯುತ್ತಿತ್ತು.


ಜನವರಿ 2ರಂದು ದೇವಸ್ಥಾನ ಆಡಳಿತ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ದೇವಸ್ಥಾನದ ಎಲ್ಲಾ ಪದಾಧಿಕಾರಿಗಳು ಎಲ್ಲಾ ವರ್ಗದ ಜನರಿಗೂ ವ್ಯಾಪಾರಕ್ಜೆ ಅನುಮತಿ ನೀಡಿ ನಾಡಿನ ಶಾಂತಿ ಸೌಹಾರ್ದತೆಯನ್ನು ಎತ್ತಿ ಹಿಡಿಡಿರುತ್ತಾರೆ. ಇದಕ್ಕಾಗಿ ದೇವಸ್ಥಾನ ಆಡಳಿತ ಸಮಿತಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಮುಂದಿನ ದಿನಗಳಲ್ಲಿ ನಾಡಿನ ಶಾಂತಿಯನ್ನು ಕೆಡಿಸಲು ಪ್ರಯತ್ನಿಸುವವರಿಗೆ ಇದೊಂದು ಮಾದರಿಯಾಗಲಿ ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!