ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ನಲ್ಲಿ ವಾರ್ಷಿಕೋತ್ಸವ ಸಂಭ್ರಮ
ಪುತ್ತೂರು: ಮೇನಾಲಾ ಮಧುರ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ವಾರ್ಷಿಕ ಸಮಾರಂಭ ಡಿ.31 ರಂದು ನಡೆಯಿತು. ಮಧುರಾ ಗ್ರೂಪ್ ನ ಸಂಸ್ಥಾಪಕರಾದ ಡಿ.ಎ.ಖಾದರ್ ಹಾಜಿ ಮಧುರಾ ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶಾಲಾ ಶಿಕ್ಷಕಿಯಾದ ರಾಬಿಯಾ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪಿ.ಎ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರು ಮತ್ತು ಸೈಕಾಲಜಿಸ್ಟ್, ಮೈಂಡ್ ಟ್ರೈನರ್ ಅಂಡ್ ಕೋಚ್ ಆಗಿರುವ ಡಾ.ಸರ್ಪ್ರಾಝ್ ಜೆ.ಹಾಸಿಂ ಮಾತನಾಡಿ ಶಿಕ್ಷಣ ಎಂಬುದು ನಾಲ್ಕು ಗೋಡೆಗಳ ಮಧ್ಯೆ ಇರುವಂತದ್ದು ಅಲ್ಲ ತರಗತಿಯಲ್ಲಿ ಶಿಕ್ಷಕರು ಏನನ್ನು ಹೇಳುತ್ತಾರೋ ಅದನ್ನು ಹೊರಗಡೆ ಪ್ರಸ್ತುತ ಪಡಿಸುವುದು ಮುಖ್ಯವಾಗಿರುತ್ತದೆ.
ಶಿಕ್ಷಕರಿಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಎಷ್ಟು ಜವಾಬ್ದಾರಿ ಇರುತ್ತದೋ ಅದಕ್ಕಿಂತ ಹೆಚ್ಚಾಗಿ ಪೋಷಕರಿಗೆ ಇರುತ್ತದೆ ಎಂದು ಹೇಳಿ ಮಕ್ಕಳ ಸಾಧನೆಯನ್ನು ಕೇಳಿ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪೋಷಕರಿಗೆ ಹಾಗೂ ಆಡಳಿತಾಧಿಕಾರಿಗಳಿಗೆ ಶುಭಹಾರೈಸಿದರು.
ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು ಇದರ Ortho ವಿಭಾಗದ ಮುಖ್ಯಸ್ಥರಾದ ಡಾ. ಸಚಿನ್ ಶಂಕರ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಉಚಿತವಾಗಿ ಆಯೋಜನೆ ಮಾಡಲಾಗುವುದೆಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಹಮೀದ್ ಪಿ.ಎಂ.ಎಚ್. ಈಶ್ವರಮಂಗಲ ಮಾತನಾಡಿ ವಿದ್ಯಾಬ್ಯಾಸ ಎಂಬುದು ನಮ್ಮ ಆರ್ಥಿಕ ಸುಧಾರಣೆಗೆ ಬೇಕಾದ ಯಂತ್ರವಲ್ಲ, ಹೊರತು ಅದು ನಮ್ಮ ಬೆಳವಣಿಗೆ, ಮನುಷ್ಯತ್ವ ವಿಕಾಸಕ್ಕೆ ಬೇಕಾದ ಸಂಪತ್ತಾಗಿದೆ ಎಂದು ಮನವರಿಕೆ ಮಾಡಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭಹಾರೈಸಿದರು.
ಸಂಸ್ಥೆಯ ಆಡಳಿತ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಉಮ್ಮರ್ ಬೀಜದಕಟ್ಟೆ ಅವರು ಮಾತನಾಡಿ ಶಿಕ್ಷಣವೊಂದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನು ಜಯಿಸಬಹುದು.
ತಮ್ಮ ಮಕ್ಕಳು ಅಭಿವೃದ್ಧಿಯಾಗಬೇಕಾದರೆ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಾದರೆ ತಾಯಂದಿರ ಪಾತ್ರ ಪ್ರಮುಖವಾದದ್ದು ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮಧುರಾ ಗ್ರೂಪ್ ಸಂಸ್ಥಾಪಕ ಡಿ.ಎ ಖಾದರ್ ಹಾಜಿ ಮಧುರಾ, ಅಧ್ಯಕ್ಷ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಧುರಾ,
ನಿರ್ದೇಶಕರಾದ ಅಹ್ಮದುಲ್ ಕಬೀರ್, ಸಂಸ್ಥೆಯ ಆಡಳಿತಾಧಿಕಾರಿ ಜಾಫರ್ ಸಾಧಿಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶೆಫೀನಾ, ಸಂಸ್ಥೆಯ ಮುಖ್ಯ ಶಿಕ್ಷಕಿ ತಪಸ್ವಿನಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯನಿರ್ವಾಹಕ ಶೈಕ್ಷಣಿಕ ನಿರ್ದೇಶಕರಾದ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು .
ಸನ್ಮಾನ: ಸುಳ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ನೆರವೇರಿಸಿದರು.
ಶಿಕ್ಷಕಿ ಶ್ವೇತಾ ಮಾರಿಯಾ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಶಫ್ರೀನಾ ವಂದಿಸಿದರು, ಶಿಕ್ಷಕಿ ಶೈಖ್ ಝಹೀರಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸಾಂಸ್ಕ್ರತಿಕ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.