ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ಯು. ಟಿ ಖಾದರ್ ಆಕ್ರೋಶ
ಮಂಗಳೂರು: ಸುರತ್ಕಲ್ ಜಲೀಲ್ ಕೊಲೆ ಘಟನೆ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ ನೈತಿಕ ಪೊಲೀಸ್ ಗಿರಿ, ಅನೈತಿಕ ದಾಳಿ ನಡೆಯುತ್ತಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ರೋಶ ಹೊರ ಹಾಕಿದ್ದಾರೆ.
ಬೇಲೆಬಲ್ ಸೆಕ್ಷನ್ ಹಾಕುವುದರಿಂದ ಆರೋಪಿಗಳು ಬೇಲ್ ಪಡೆದು ಹೊರಬರುತ್ತಾರೆ. ಹೀಗಾಗಿ ಪದೇಪದೆ ಅಂತಹ ಘಟನೆಗಳು ನಡೆಯುತ್ತಿವೆ. ಗೃಹಸಚಿವರ ಜತೆ ನಿನ್ನೆ ಇದೇ ವಿಚಾರದ ಬಗ್ಗೆ ನಾನು ಚರ್ಚೆ ಮಾಡಿದ್ದೆ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.