ಕಾರ್ಕಳದಲ್ಲಿ ‘ಹಿಂದುತ್ವ’ ಫೈಟ್: ಸಚಿವ ಸುನಿಲ್ ಕುಮಾರ್ ಗೆ ಸವಾಲು ಹಾಕಿದ ಮುತಾಲಿಕ್
ಕಾರ್ಕಳ ಕ್ಷೇತ್ರವನ್ನು ನನಗೆ ಬಿಟ್ಟುಕೊಡಿ, ಹಿಂದುತ್ವ ಏನೆಂದು ತೋರಿಸುತ್ತೇನೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು ಆ ಮೂಲಕ ಸಚಿವ ಸುನೀಲ್ ಕುಮಾರ್’ ವಿರುದ್ಧ ತೊಡೆ ತಟ್ಟಿದ್ದಾರೆ.

ಅನೇಕ ವರ್ಷಗಳಿಂದ ಇಲ್ಲಿ ಸ್ಪರ್ಧಿಸುತ್ತಿರುವ
ಸುನೀಲ್ ಕುಮಾರ್ ಅವರು ಕ್ಷೇತ್ರ ತ್ಯಾಗ ಮಾಡಿ ಬೇರೆ ಕಡೆ ಚುನಾವಣೆಗೆ ಎಂದು ಹೇಳಿರುವ ಮುತಾಲಿಕ್ ನಾನು ಹಾಗೂ ಸುನೀಲ್ ಕುಮಾರ್ ಅವರನ್ನು ಹಿಂದುತ್ವ ತಕ್ಕಡಿಯಲ್ಲಿಟ್ಟು ತೂಗಿದರೆ ಯಾರು ಹಿಂದುತ್ವದ ಪರವಾಗಿ ಹೆಚ್ಚು ಕೆಲಸ ಮಾಡುತ್ತಾರೆ ಎನ್ನುವ ಬಗ್ಗೆ ಜನರ ಮುಂದೆ ಇಡೋಣ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರಿಕಾಗೋಷ್ಠಿ:
ಪ್ರಮೋದ್ ಮುತಾಲಿಕೆ ಹೇಳಿಕೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ರವರು ಸುನಿಲ್ ಕುಮಾರ್ ಅವರು ಪ್ರಖರ ಹಿಂದುತ್ವವಾದಿಯಾಗಿದ್ದು ಕಾರ್ಕಳ ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇದೀಗ ವಿಘ್ನ ಸಂತೋಷಿಗಳು ಪ್ರಮೋದ್ ಮುತಾಲಿಕ್ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಮುತ್ತಾಲಿಕ್ ಅವರ ಹಿಂದುತ್ವ ಗೆಲ್ಲುತ್ತಾ ಅಥವಾ ನಮ್ಮದು ಗೆಲ್ಲುತ್ತಾ ಎಂಬುದನ್ನು ಕಾರ್ಯಕರ್ತರು ತೋರಿಸಿಕೊಡಲಿದ್ದಾರೆ ಎಂದು ಸುರೇಶ್ ನಾಯಕ್ ಸವಾಲು ಹಾಕಿದ್ದಾರೆ.