ಸುಳ್ಯ: ಹೊಳೆಗೆ ಬಿದ್ದು ಇಬ್ಬರು ದುರ್ಮರಣ
ಸುಳ್ಯ ತಾಲೂಕಿನ ಯೇನೆಕಲ್ಲಿನ ಮುಖ್ಯ ರಸ್ತೆಯ ಸೇತುವೆಯ ಕೆಳಭಾಗದಲ್ಲಿ ಹೊಳೆಗೆ ಬಿದ್ದು ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಮೃತರನ್ನು ಸ್ಥಳೀಯ ನಿವಾಸಿಗಳಾದ ಧರ್ಮಪಾಲ ಪರಮಲೆ (46ವ.) ಮತ್ತು ಬೆಳ್ಯಪ್ಪ ಚಳ್ಳಂಗಾರು, ಚೊಕ್ಕಾಡಿ (49ವ.) ಎಂದು ಗುರುತಿಸಲಾಗಿದೆ. ಧರ್ಮಪಾಲರು ಕೆಲವು ಸಮಯಗಳಿಂದ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ಕಸವಿಲೇವಾರಿ ಘಟಕದಲ್ಲಿ ದಿನಕೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಳೆಯಲ್ಲಿದ ಪಂಪಿನ ಫುಟ್ ವಾಲ್ ತೆಗೆಯಲು ನೀರಿಗಿಳಿಯುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿರಬಹುದೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ಶವ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೋಯಲಾಗಿದೆ.