ಕ್ರೈಂ

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ- ಆರೋಪಿಯ ಬಂಧನಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಯೋರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕಾಞ೦ಗಾಡ್ ಅಲಾಮಿಪಲ್ಲಿಯ ಅಬ್ದುಲ್ ಶುಹೈಬ್ ( 21) ಬಂಧಿತ ವಿದ್ಯಾರ್ಥಿ. ಕಾಞ೦ಗಾ ಡ್ನ ನಂದನಾ ವಿನೋದ್ ( 20) ಎಂಬಾಕೆಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.

ನಂದನಾ ಪಡನ್ನಕಾಡಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಳು. ನಂದಾನ ಜೊತೆ ಪ್ರೀತಿಯ ನಾಟಕವಾಡಿ ನಂದನಾ ಕಳುಹಿಸಿಕೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಬೆದರಿಕೆಯೊಡ್ಡಿದ್ದರಿಂದ ಬೇಸತ್ತು ನಂದನಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ನಂದನಾ ಪತ್ತೆಯಾಗಿದ್ದಳು. ಆತ್ಮಹತ್ಯೆಯ ಮುನ್ನ ಶುಹೈಬ್ ನಂದನಾಳಿಗೆ ವೀಡಿಯೊ ಕಾಲ್ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ವೀಡಿಯೊ ಕಾಲ್ ನಡುವೆಯೇ ನಂದನಾ ನೇಣಿಗೆ ಶರಣಾಗಿರುವುದಾಗಿ ಶಂಕಿಸಲಾಗಿದೆ. ಇದರಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!