ಬಾಲಕಿಗೆ ಲೈಂಗಿಕ ಕಿರುಕುಳ: 92 ವರ್ಷದ ವ್ಯಕ್ತಿಗೆ 3 ವರ್ಷ ಜೈಲು
ಒಡಿಶಾ: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 92 ವರ್ಷದ ವ್ಯಕ್ತಿಗೆ ಸ್ಥಳೀಯ ಕೋರ್ಟ್ 3 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಮೂರು ವರ್ಷಗಳ ಹಿಂದೆ ಬಾಲಕಿ ಮೇಲೆ ದೌರ್ಜನ್ಯ ನಡೆದಿತ್ತು.

ಹೆಚ್ಚುವರಿ ಕೇಂದ್ರಪಡಾ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿಯವರು ಈ ತೀರ್ಪು ನೀಡಿದ್ದಾರೆ.
ಆರೋಪಿಗೆ ರೂ.3,000 ದಂಡವನ್ನು ವಿಧಿಸಲಾಗಿದೆ. ದಂಡ ತೆರುವಲ್ಲಿ ವಿಫಲಗೊಂಡರೆ ಹೆಚ್ಚುವರಿ 6 ತಿಂಗಳು ಜೈಲಿನಲ್ಲೇ ಕಳೆಯಬೇಕಿದೆ.