ರಾಹುಲ್‌ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಟಿ ರಮ್ಯಾ
ರಾಯಚೂರು: ರಾಯಚೂರು ನಗರದಲ್ಲಿ ಸಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಭಾಗಿಯಾಗಿದ್ದಾರೆ.

ಸಂಜೆ 4 ಗಂಟೆ ವೇಳೆ ಮಂತ್ರಾಲಯ ಮಾರ್ಗದ ವೃಂದಾವನ ಹೋಟೆಲ್‌ನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದು, ಸಕ್ರಿಯ ರಾಜಕಾರಣದಿಂದ ದೂರ ಉಳಿದಿರುವ ನಟಿ ರಮ್ಯಾ ಅವರು, ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದ್ದು ಕುತೂಹಲ ಮೂಡಿಸಿದೆ.
ಇನ್ನು ನಗರದ ಬಸವೇಶ್ವರ ವೃತ್ತ ಪಕ್ಕದ ವಾಲ್ಕಟ್ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ಗಾಂಧಿ ಅವರು ಜನರನ್ನುದ್ದೇಶಿಸಿ ಮಾತನಾಡಿದರು.