ಬೆಳ್ತಂಗಡಿ, ಉಪ್ಪಿನಂಗಡಿ ಪರಿಸರಗಳಲ್ಲಿ ಕಳ್ಳತನ ಪ್ರಕರಣ: ಶಂಕಿತ ಆರೋಪಿ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮನವಿ
ಮಂಗಳೂರು: ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪರಿಸರಗಳಲ್ಲಿ ಕಳೆದ 2 ದಿನಗಳಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳ ಕಣ್ಣೂರು ತಳಿಪರಂಬು ನಿವಾಸಿ ತಂಗಚ್ಚ @ ಮ್ಯಾಧ್ಯೂ @ ಬಶೀರ್ ಎಂಬಾತನು ಬಾಗಿಯಾಗಿರುವ ಸಂಶಯವಿದ್ದು, ಸದ್ರಿ ಶಂಕಿತನ ವಿರುದ್ದ ಈಗಾಗಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ದಸ್ತಗಿರಿ ವಾರೆಂಟ್ ಜಾರಿಯಾಗಲು ಬಾಕಿಯಿರುತ್ತದೆ.

ಈತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣೆ: 08251-251055, 9480805362,
ಬೆಳ್ತಂಗಡಿ ಪೊಲೀಸ್ ಠಾಣೆ: 08256-232093, 9480805370,
ಪುತ್ತೂರು ಪೊಲೀಸ್ ಠಾಣಾ ಉಪನಿರೀಕ್ಷಕರು: 08251-230555, 9480805361,
ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ: 9480805300 / 0824 2220500.
ಕರೆಮಾಡಿ ಮಾಹಿತಿ ನೀಡಬೇಕಾಗಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದೆ.




