ಎಲ್‌ಪಿಜಿ ಶುಲ್ಕ, ಇಂಧನ ವೆಚ್ಚ ವಸೂಲಿ ಮಾಡುವಂತಿಲ್ಲ-ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ ಎಚ್ಚರಿಕೆ
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಬುಧವಾರ ಕಠಿಣ ಎಚ್ಚರಿಕೆಯನ್ನು ನೀಡಿರುವ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ), ಎಲ್‌ಪಿಜಿ ಶುಲ್ಕ ಅಥವಾ ಇಂಧನ ವೆಚ್ಚ ವಸೂಲಿ ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ ಎಂದು ಹೇಳಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ.

ಇಂಥ ಶುಲ್ಕಗಳನ್ನು ಹೇರುತ್ತಿರುವ ಬಗ್ಗೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಹಲವು ದೂರುಗಳು ಬಂದಿದ್ದು ದರಪಟ್ಟಿಯಲ್ಲಿ ಸೂಚಿಸಲಾಗಿರುವ ದರಕ್ಕೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ವಿಧಿಸಬಹುದಾಗಿದೆ ಎಂದು ಅದು ಹೇಳಿದೆ.



