SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಯಾಣಿಸುತ್ತಿದ್ದ ಕಾರು ಬೆಂಕಿಗಾಹುತಿ
ಮಡಿಕೇರಿ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ವರದಿಯಾಗಿದೆ.
ಮಜೀದ್ ಕೊಡ್ಲಿಪೇಟೆ ಸಂಚರಿಸುತ್ತಿದ್ದ ಕಾರು ಬೆಂಕಿ ಹೊತ್ತಿ ಕಾರು ಭಸ್ಮವಾಗಿದೆ, ಅಬ್ದುಲ್ ಮಜೀದ್ ಹಾಗೂ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಫೆ.7ರಂದು ರಾತ್ರಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು ಪಕ್ಷದ ಸಂಘಟನಾ ಕಾರ್ಯದ ನಿಮಿತ್ತ ಉಡುಪಿ ಜಿಲ್ಲೆಯಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕುಶಾಲನಗರ ಸಮೀಪದ ಆನೆಕಾಡು ಪ್ರದೇಶದ ಬಳಿ ಘಟನೆ ಸಂಭವಿಸಿದೆ.
ಅವರು ಪ್ರಯಾಣಿಸುತ್ತಿದ್ದ ಕ್ರೇಟಾ ಕಾರಿನ ಇಂಜಿನ್ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಪಾರ ಸಮಯಪ್ರಜ್ಞೆ ಮೆರೆದ ಕಾರಿನ ಚಾಲಕ ಸಮೀರ್ ಅವರು ತಕ್ಷಣವೇ ವಾಹನವನ್ನು ನಿಲ್ಲಿಸಿ, ಅಬ್ದುಲ್ ಮಜೀದ್ ಅವರನ್ನು ಸುರಕ್ಷಿತವಾಗಿ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ.
ಅವರು ಕಾರಿನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ, ನೋಡ ನೋಡುತ್ತಿದ್ದಂತೆಯೇ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.





