ಕರಾವಳಿ

ಪುತ್ತೂರು: ಹೃದಯಾಘಾತದಿಂದ ನೇರೋಳ್ತಡ್ಕದ ಯುವಕ ನಿಧನ



ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಸರ್ವೆ ಗ್ರಾಮದ ನೇರೋಳ್ತಡ್ಕದಲ್ಲಿ ಜ.11ರಂದು ನಡೆದಿದೆ. ದಿ.ಅಣ್ಣು ನಾಯ್ಕ ನೇರೋಳ್ತಡ್ಕ ಎಂಬವರ ಪುತ್ರ ಅಶೋಕ ನಾಯ್ಕ(23.ವ) ನಿಧನ ಹೊಂದಿದವರು.



ಅಶೋಕ ನಾಯ್ಕ ಅವರಿಗೆ ಕೆಲ ದಿನಗಳಿಂದ ಜ್ವರ ಇದ್ದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕೂಲಿ ಕೆಲಸ ಮಾಡುತ್ತಿದ್ದ ಅಶೋಕ ನಾಯ್ಕ ಅವರು ಸ್ಥಳೀಯವಾಗಿ ಚಿರಪರಿಚಿತರಾಗಿದ್ದರು. ಮೃತರು ತಾಯಿ ಪದ್ಮಾವತಿ, ತಮ್ಮ ರಾಜೇಶ್ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!